ಕೆ ಎಸ್ ಅಶ್ವಥ್ ಮಗ ಶಂಕರ್ ಅಶ್ವಥ್ ಆಗ ನಟ ಈಗ ಕ್ಯಾಬ್ ಡ್ರೈವರ್ | Oneindia Kannada

2017-12-30 3

Late K S Ashwath, Veteran Kannada Actor was popularly called as chamaiah Meshtru. K S Ashwath appeared in over 370 films during his five-decade-long career. Shankar Ashwath, son of K S Ashwath is also an actor who had acted in several Kannada Films & Serials as well. But now since Shakar Ashwath was not getting opportunities from Movies & Serials, he turns as Cab Driver. Watch Video to know more.

ಚಾಮಯ್ಯ ಮೇಷ್ಟ್ರು ಖ್ಯಾತಿಯ ಹಿರಿಯ ನಟ ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಅವರು ಇದೀಗ ಜೀವನ ನಿರ್ವಹಣೆಗಾಗಿ ಕ್ಯಾಬ್ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.ಸಿನಿಮಾ ಮತ್ತು ಕಿರುತೆರೆಯಲ್ಲಿ ಅಭಿನಯಿಸುತ್ತಿದ್ದ ನಟ ಶಂಕರ್ ಅಶ್ವಥ್ ಅವರಿಗೆ ಹೆಚ್ಚಿನ ಅವಕಾಶಗಳು ಸಿಗದೇ ಜೀವನ ನಿರ್ವಹಣೆಗಾಗಿ ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಮನೋಜ್ಞ ಅಭಿನಯದ ಮೂಲಕವೇ ಕನ್ನಡಿಗರ ಮನೆ-ಮನ ಗೆದ್ದವರು ಕೆ.ಎಸ್ ಅಶ್ವಥ್. ಇಂತಹ ಮೇರು ನಟನ ಮಗನಾಗಿ ಎರಡೂವರೆ ದಶಕಗಳಿಂದ ಪುತ್ರ ಶಂಕರ್ ಅಶ್ವಥ್ ಬೆಳ್ಳಿತೆರೆ ಮತ್ತು ಕಿರುತೆರೆಗಳಲ್ಲಿ ಅಭಿನಯಿಸಿದ್ದರು.ಶಂಕರ್ ಅಶ್ವಥ್ ಅವರಿಗೆ ಇತ್ತೀಚೆಗೆ ಹೆಚ್ಚಿನ ಅವಕಾಶಗಳ ಸಿಗ್ತಿಲ್ಲ. ಈ ಕಾರಣದಿಂದ ಅವರು ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ.. ಈ ಬಗ್ಗೆ ಮಾತನಾಡಿದ ಶಂಕರ್ ಪತ್ನಿ ಸುಧಾ, ಅವರು ಬದುಕುವ ದಾರಿ ನೋಡಿಕೊಂಡಿದ್ದಾರೆ. ನಾವು ಯಾರ ಹಂಗು ಇಲ್ಲದೆ ಬದುಕುವುದಕ್ಕಾಗಿ ಈ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ರಂಗವನ್ನು ಬಿಟ್ಟಿಲ್ಲ. ಸಣ್ಣ ಪುಟ್ಟ ಸಿನಿಮಾ ಮಾಡುತ್ತಿದ್ದಾರೆ. ಏಪ್ರಿಲ್ ನಿಂದ ಧಾರಾವಾಹಿ ಅವಕಾಶ ಸಿಕ್ಕಿಲ್ಲ. ಬಿಡುವಿನ ವೇಳೆ ಮನೆಯಲ್ಲಿ ಕುಳಿತುಕೊಳ್ಳೊವುದು ಬೇಡ. ಸ್ವಾಭಿಮಾನಿಗೆಯಾಗಿ ಬದುಕಬೇಕು ಎಂದು ಈ ಕೆಲಸ ಮಾಡುತ್ತಿದ್ದಾರೆ ಅಂದ್ರು.